ಕೆಲವರಂತೂ..__
ಕೆಲವರಂತೂ ತಮ್ಮ
ಗರ್ವಬಿಡುವುದೇ ಇಲ್ಲ
ಬದಲಿಗೆ ಕಳೆದುಕೊಳ್ಳುತ್ತಾರೆ
ಪ್ರೀತಿಸುವ ಸುಖವನ್ನ
ಕೆಲವರಂತೂ ತಮ್ಮ
ಕಪಿಮುಷ್ಟಿ ಸಡಲಿಸುವುದೇ ಇಲ್ಲ
ಬದಲಿಗೆ ಕಳೆದುಕೊಳ್ಳುತ್ತಾರೆ
ಮೇಲೆ ಮೇಲಕ್ಕೆ ಏರುವ ಸುಖವನ್ನ
ಕೆಲವರಂತೂ ತೊರೆಯುವುದೇ ಇಲ್ಲ
ತಮ್ಮ ಅನಿಶ್ಚಿತತೆ ಅಪನಂಬಿಕೆಗಳನ್ನ
ಬದಲಿಗೆ ಕಳೆದುಕೊಳ್ಳುತ್ತಾರೆ
ವಿಶ್ವಾಸ ಜೀವನದ ತುಂಬು ಸುಖವನ್ನ
ಕೆಲವರಂತೂ ನೀಗಿಕೊಳ್ಳುವುದೇ ಇಲ್ಲ
ಸಂಶಯದ ಬಿಗಿ ಹಿಡಿತವನ್ನ
ಬದಲಿಗೆ ಕಳೆದುಕೊಳ್ಳುತ್ತಾರೆ
ಶಾಂತಿನೆಮ್ಮದಿಯ ಜೀವನವನ್ನ
ಮೂಲ : ಹೇಮರಾಜ ಭಟ್
ಕನ್ನಡಕ್ಕ: ಜೈ ಕುಮಾರ್ ಮರಿಯಪ್ಪ
No comments:
Post a Comment